   ಇದನ್ನು ಮೂಲದೊಡನೆ ಪರಿಶೀಲಿಸಿ

ಎಲೆಕ್ಟ್ರಾನ್ ದೃಕ್ವಿಜ್ಞಾನ: ಎಲೆಕ್ಟ್ರಾನ್ ಕಿರಣಗಳ ಪ್ರಸಾರವನ್ನು ವಿವರಿಸುವ ಭೌತವಿಜ್ಞಾನದ ವಿಭಾಗ. 1926ರಲ್ಲಿ ಬುಷ್ ಎಂಬಾತ ಎಲೆಕ್ಟ್ರಾನ್ ಮಸೂರಗಳ ಕ್ರಿಯೆಯನ್ನು ಸೈದ್ಧಾಂತಿಕವಾಗಿ ವಿವರಿಸಿದ ಮೇಲೆ ಈ ವಿಜ್ಞಾನದ ಬೆಳೆವಣಿಗೆ ಪ್ರಾರಂಭವಾಯಿತು.
ಕನಿಷ್ಠ ಕ್ರಿಯೆ ಮತ್ತು ಫರ್ಮನ ನಿಯಮಗಳನ್ನು ಒಟ್ಟಿಗೆ ಪರೀಕ್ಷಿಸಿದರೆ ಸಂವೇಗ (ಮೊಮೆಂಟಂ) ಮತ್ತು ವಕ್ರೀಭವನ ಸೂಚ್ಯಂಕ ಕ್ರಮವಾಗಿ ಗತಿವಿಜ್ಞಾನ ಮತ್ತು ದೃಕ್ವಿಜ್ಞಾನದಲ್ಲಿ ಸಮಾನಪಾತ್ರಗಳನ್ನು ನಿರ್ವಹಿಸುವುದು ತಿಳಿಯುತ್ತದೆ. ಎಲೆಕ್ಟ್ರಾನ್ ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಹಾದುಹೋಗು ವುದನ್ನು ಚಿತ್ರದಲ್ಲಿ ತೋರಿಸಿದೆ. ಕನಿಷ್ಠ ಕ್ರಿಯೆ ನಿಯಮದಂತೆ ಚಿತ್ರದ ಜ್ಯಾಮಿತಿಯನ್ನನುಸರಿಸಿ,
              . . . . .  (1) ಎಂದು ಬರೆಯಬಹುದು. ಅನಂತರ  . . . . .  (2)            
ಎಂದು ಬರೆಯುವುದು ಸುಲಭ.  ಮತ್ತು   ಪತನಕೋನ ಮತ್ತು ವಕ್ರೀಭವನಕೋನ.  ಮತ್ತು  ಕ್ಷೇತ್ರ (2) ಮತ್ತು (1) ರಲ್ಲಿ ಕ್ರಮವಾಗಿ ಎಲೆಕ್ಟ್ರಾನಿನ ಸಂವೇಗ h1 ಮತ್ತು h2 ಗಳು ಕ್ರಮವಾಗಿ ಕ್ಷೇತ್ರ (1) ಮತ್ತು (2)ರ ವಕ್ರೀಭವನ ಸೂಚಿಗಳಾದರೆ ಫರ್ಮ ನಿಯಮದಂತೆ  . . . . (3)
ಎಂದು ತೋರಿಸಬಹುದು, ಸಮೀಕರಣ (2) ಮತ್ತು (3) ಸಂವೇಗ ಮತ್ತು ವಕ್ರೀಭವನ ಸೂಚಿಗಳಿಗಿರುವ ಸಾಮ್ಯವನ್ನು ತೋರಿಸುತ್ತವೆ. 
ಗಾಜು, ನೀರು ಮುಂತಾದ ಪಾರದರ್ಶಕಗಳು ಬೆಳಕಿನ ಕಿರಣಗಳನ್ನು ಬಾಗಿಸುವಂತೆ ವಿದ್ಯುತ್ ಮತ್ತು ಕಾಂತಕ್ಷೇತ್ರಗಳು ಎಲೆಕ್ಟ್ರಾನ್ ಕಿರಣಗಳನ್ನು ಬಾಗಿಸುತ್ತವೆ. 
ಅಕ್ಷಸಮವಿರುವ ಸ್ಥಿರ ವಿದ್ಯುತ್ ಕ್ಷೇತ್ರ ಎಲೆಕ್ಟ್ರಾನ್ ಮಸೂರದಂತೆ ವರ್ತಿಸುತ್ತದೆ. ಈ ಮಾತಿನ ಯಾಥಾಥರ್ಯ್‌ವನ್ನು ತಿಳಿಯಲು ಚಿತ್ರದಲ್ಲಿ ನಿರೂಪಿಸಿರುವ ಎಲೆಕ್ಟ್ರಾನಿನ ಚಲನೆಯನ್ನು ಗಮನಿಸಿ. ವಿಭವದ ವ್ಯತ್ಯಾಸ  ಮಿತಿಯಲ್ಲಿ ಮಾತ್ರ ಆಗುತ್ತದೆ. ಇದರಿಂದ ಹೊರಗೆ ಎರಡೂ ಕಡೆಯಲ್ಲಿ ಎಲೆಕ್ಟ್ರಾನುಗಳು ಸರಳರೇಖೆಯಲ್ಲಿ ಚಲಿಸುತ್ತವೆ. ಕೋನ ಚಿ ದ ಮೌಲ್ಯ ಬಹಳ ಕಡಿಮೆಯಾಗಿದ್ದರೆ
                                    . . . . .(4)
ಎಂದು ಬರೆಯಬಹುದು. ಅಕ್ಷಕ್ಕೆ ಅತಿ ಸಮೀಪದಲ್ಲಿ ಹಾಯುವ ಎಲೆಕ್ಟ್ರಾನುಗಳ ಪಥವನ್ನು ಈ ಸಮೀಕರಣ ವಿವರಿಸುತ್ತದೆ. ಆದ್ದರಿಂದ ಇದನ್ನು ಉಪಾಕ್ಷ ಸಮೀಕರಣ ಎಂದು ಕರೆಯುತ್ತಾರೆ.  ಆದಾಗ  
                                          . . . . .(5)
ಎಂದು ಬರೆಯಬಹುದು. ಇಲ್ಲಿ  ಮತ್ತು  ಗಳು  ನ ಉತ್ಪನ್ನಗಳು.
ಈಗ ಮಸೂರದ ಕೆಲಸವನ್ನು ತಿಳಿಯುವುದು ಸುಲಭ. ಚಿತ್ರದಲ್ಲಿ ಪಥ (1)ಮತ್ತು (2)ನ್ನು ಗಮನಿಸಿ ಪಥ (1)ಕ್ಕೆ ಸಂಬಂಧಿಸಿದಂತೆ ಸಮೀಕರಣ (5)ನ್ನು 		                                                       . . . . .(6)
ಎಂದೂ ಪಥ (2)ಕ್ಕೆ ಸಂಬಂಧಿಸಿದಂತೆ ಅದನ್ನು 
                               . . . . .(7)
ಎಂದೂ ಬರೆಯಬಹುದು. (6) ಮತ್ತು (7) ರ ಬಲಪಕ್ಷಗಳನ್ನು ಸಮೀಕರಿಸಿ
                . . . . .(8)
ಎಂದೂ ಬರೆಯಬಹುದು. (8) ರಿಂದ 
                                      . . . . .(9)
ಎಂದು ಬರೆಯಬಹುದು. ಇದು ಎರಡನೆ ಪಥದ ಓಟವನ್ನು ಅವಲಂಬಿಸಿಲ್ಲವೆಂದು ಸ್ಪಷ್ಟವಾಗಿ ತಿಳಿಸುತ್ತದೆ.  ಯಿಂದ ಹೊರಡುವ ಎಲ್ಲ ಕಿರಣಗಳೂ ಅವುಗಳ ಓಟಗಳೂ ಬೇರೆ ಬೇರೆಯಾಗಿದ್ದರೂ ಪ್ರತಿಬಿಂಬಕ್ಷೇತ್ರದಲ್ಲಿ  ಬಳಿ ಸಂಧಿಸುತ್ತವೆ. ವಸ್ತು ಕ್ಷೇತ್ರದ ಪ್ರತಿಬಿಂದುವಿಗೂ ತಕ್ಕಂತೆ ಪ್ರತಿಬಿಂಬಕ್ಷೇತ್ರದಲ್ಲಿ ಒಂದು ಬಿಂದು ಮೂಡುತ್ತದೆ ಲಂಬನ  ಯನ್ನು ಮಾತ್ರ ಅವಲಂಬಿಸಿರುವುದರಿಂದ ಅಕ್ಷಕ್ಕೆ ಲಂಬವಾಗಿರುವ ಯಾವುದೇ ಎರಡು ಅನುವರ್ತಿ (ಕಾಂಜುಗೇಟ್) ಸಮತಳಗಳಲ್ಲಿ ಅದು ಸ್ಥಿರಮೌಲ್ಯವನ್ನು ಹೊಂದಿರುತ್ತದೆ.
ಅಕ್ಷಸಮ ಸ್ಥಿರ ವಿದ್ಯುತ್ ಕ್ಷೇತ್ರಗಳು ಎಲೆಕ್ಟ್ರಾನ್ ಮಸೂರಗಳಂತೆ ವರ್ತಿಸುವುದರಿಂದ ವಿವಿಧ ಎಲೆಕ್ಟ್ರೋಡುಗಳ ಜೋಡಣೆಯಿಂದ ಬೇಕಾದ ಮಸೂರಗಳನ್ನು ಮಾಡಿಕೊಳ್ಳಬಹುದು 
(i) ಏಕರಂಧ್ರಮಸೂರ, ಅತಿ ಸಾಮಾನ್ಯವಾದ ಮಸೂರವೆಂದರೆ ಎರಡು ವಿಭವ ಕ್ಷೇತ್ರಗಳನ್ನು ಬೇರ್ಪಡಿಸುವ ಒಂದು ವಾಹಕ ತಟ್ಟೆಯಲ್ಲಿನ ರಂಧ್ರ. ಇದರ ರಚನೆ ಮತ್ತು ಕೆಲಸವನ್ನು ವಿಶೇಷವಾಗಿ ಅಭ್ಯಾಸಮಾಡಿರುವ ಡೇವಿಸನ್ ಮತ್ತು ಕ್ಯಾಲ್ಸಿಕ್ ಅವರು ಮಸೂರದ ನಾಭಿ ದೂರ ಎಂದು ತೋರಿಸಿದ್ದಾರೆ.   ಮತ್ತು ಗಳು ವೋಲ್ಟಿನಲ್ಲಿ ವಿಭವದ ಮೌಲ್ಯಗಳು.
                                          . . . . .(10)
ii) ಕೊಳವೆ ಮಸೂರ. ಒಂದೇ ಅಕ್ಷವುಳ್ಳ ಬೇರೆ ಬೇರೆ ವಿಭವಗಳಿರುವ ಎರಡು ಕೊಳವೆಗಳು ಮಸೂರದಂತೆ ವರ್ತಿಸುತ್ತವೆ. ಇದರಲ್ಲಿ ಎರಡನೆಯ ನಾಭಿ ದೂರ  ಯಾವಾಗಲೂ  ಕ್ಕಿಂತ ಹೆಚ್ಚಾಗಿರುತ್ತದೆ. ಎರಡನೆಯ ಪ್ರಮುಖಬಿಂದು  ಕೊಳವೆಗಳ ಮಧ್ಯದ ಸಮತಲಕ್ಕೆ ಎಡಭಾಗದಲ್ಲಿರುತ್ತದೆ.  ಹೆಚ್ಚಾದರೆ  ಕಡಿಮೆಯಾಗುತ್ತದೆ. ಕೊಳವೆ ಮಸೂರಗಳನ್ನು ಎಲೆಕ್ಟ್ರಾನ್ ದೃಗುಪಕರಣಗಳಲ್ಲಿ ವಿಶೇಷವಾಗಿ ಬಳಸುತ್ತಾರೆ.
(iii) ಏಕವಿಭವ ಮಸೂರ (ಯೂನಿಪೊಟೆನ್ಷಿಯಲ್ ಲೆನ್ಸ್‌). ಎಲೆಕ್ಟ್ರಾನ್ ಸೂಕ್ಷ್ಮದರ್ಶಿ ಗಳಿಗೆ ಬಹುಮುಖ್ಯವಾಗಿ ಬೇಕಾದ ಮಸೂರ ಇದು. ಇದರಲ್ಲಿ ಮೂರು ಏಕಾಕ್ಷಿ ರಂಧ್ರಗಳಿವೆ. ಹೊರಗಿನ ರಂಧ್ರಗಳ ವಿಭವ ಒಂದೇ ಮೌಲ್ಯದ್ಧಾಗಿರುತ್ತದೆ. ಮಧ್ಯ ರಂಧ್ರದ ವಿಭವ ಇದಕ್ಕಿಂತ ಹೆಚ್ಚಾಗಿರಲಿ ಅಥವಾ ಕಡಿಮೆಯಾಗಿರಲಿ ಏಕವಿಭವ ಮಸೂರ ಯಾವಾಗಲೂ ಅಭಿಸರಿಸುವ (ಕನ್ವರ್ಜಿಂಗ್) ಮಸೂರದಂತೆಯೆ ವರ್ತಿಸುತ್ತದೆ. ಇದರ ರಚನೆಯನ್ನು ಚಿತ್ರದಲ್ಲಿ ನೋಡಬಹುದು.
ಏಕವಿಭವ ಮಸೂರದ ನಾಭಿದೂರದ ಮೇಲೆ ಪ್ರಭಾವ ಬೀರುವ ಪ್ರಾಚಲಗಳು (ಪ್ಯರಾಮೀಟರ್ಸ್) ಒಳಗಿನ ರಂಧ್ರದ ವ್ಯಾಸ, ಎಲೆಕ್ಟ್ರೋಡುಗಳಿಗಿರುವ ದೂರ ಮತ್ತು ಮಧ್ಯದ ಎಲೆಕ್ಟ್ರೋಡಿನ ದಪ್ಪ. ಹೊರಗಿನ ರಂಧ್ರಗಳ ವ್ಯಾಸದ ಪ್ರಭಾವ ಅಷ್ಟಿಲ್ಲ. ಒಳಗಿನ ರಂಧ್ರದ ವ್ಯಾಸ ಕಡಿಮೆಯಾದಂತೆ ನಾಭಿದೂರ ಕೂಡ ಕಡಿಮೆಯಾಗುತ್ತದೆ.
ಅಕ್ಷಸಮಾಂಗ ಸ್ಥಿರ ವಿದ್ಯುತ್ ಕ್ಷೇತ್ರಗಳಂತೆ ಅಕ್ಷಸಮಾಂಗಕಾಂತಕ್ಷೇತ್ರಗಳೂ ಎಲೆಕ್ಟ್ರಾನ್ ಮಸೂರಗಳಂತೆ ವರ್ತಿಸುತ್ತವೆ. ಸ್ಥಿರ ವಿದ್ಯುತ್ ಕ್ಷೇತ್ರದಲ್ಲಿ ಎಲೆಕ್ಟ್ರಾನನ್ನು ಬಾಗಿಸುವ ಬಲ ಕ್ಷೇತ್ರದ ದಿಕ್ಕಿನಲ್ಲಿ ವರ್ತಿಸುತ್ತದೆ. ಆದರೆ ಕಾಂತಕ್ಷೇತ್ರದಲ್ಲಿ ಇದು ಎಲೆಕ್ಟ್ರಾನಿನ ಚಲನೆಯ ದಿಕ್ಕು ಮತ್ತು ಕ್ಷೇತ್ರದ ದಿಕ್ಕುಗಳನ್ನೊಳಗೊಂಡ ಸಮತಲಕ್ಕೆ ಲಂಬವಾಗಿರುತ್ತದೆ. ಈ ಕಾರಣದಿಂದ ಕಾಂತಮಸೂರದಿಂದ ಮೂಡುವ ಪ್ರತಿಬಿಂಬ 180o ಗಳಿಗಿಂತ ಹೆಚ್ಚಾಗಿ ತಿರುಗುತ್ತದೆ. ಇದನ್ನು ಚಿತ್ರದಲ್ಲಿ ನೋಡಬಹುದು. 
ಕಾಂತ ಮಸೂರದಲ್ಲಿ ಪ್ರತಿಬಿಂಬ 180o ಗಿಂತ ಹೆಚ್ಚು ತಿರುಗುವುದನ್ನೂ ಗಮನದಲ್ಲಿಟ್ಟುಕೊಂಡರೆ
                                     . . . . .(11)
                                     . . . . .(12)
ಎಂದು ಬರೆಯಬಹುದು. ಇಲ್ಲಿ   ಎಂಬ ಸಾಮ್ಯವನ್ನು ಉಪಯೋಗಿಸಿ ಕೊಂಡಿದೆ.  ಎಲೆಕ್ಟ್ರಾನಿನ ಜಡಮಾನ,  ಎಲೆಕ್ಟ್ರಾನ್ ಹಾಯ್ದು ಬಂದಿರುವ ವಿಭವಾಂತರ. ಸಾಮಾನ್ಯವಾಗಿ ಬಳಸುವ ಕಾಂತ ಮಸೂರಗಳಲ್ಲಿ ಕ್ಷೇತ್ರದ ಹಂಚಿಕೆ ಗಂಟೆಯ ಆಕೃತಿಯಲ್ಲಿರುತ್ತದೆ. ಚಿತ್ರದಲ್ಲಿ ಇಂಥ ಹಂಚಿಕೆಯನ್ನು ನೋಡಬಹುದು. ಇದನ್ನು ಸಮೀಕರಣದ ರೂಪದಲ್ಲಿ 
                                                    ……(13)
ಎಂದು ಬರೆಯಬಹುದು. ಇಷ್ಟಾದರೆ ಸಮೀಕರಣ (11) ರಿಂದ
                                      ....(14)
ಎಂದು ಬರೆಯಬಹುದು.
ಇದನ್ನು ಸಮೀಕರಣ (5) ರೊಂದಿಗೆ ಹೋಲಿಸಿ ನೋಡಿದರೆ ಕಾಂತಕ್ಷೇತ್ರ ಸ್ಥಿರವಿದ್ಯುತ್ ಕ್ಷೇತ್ರದಂತೆಯೇ ಮಸೂರದ ಕೆಲಸ ಮಾಡುತ್ತದೆಂಬುದು ಮನದಟ್ಟಾಗುತ್ತದೆ. ನಾಭಿದೂರ ಮಸೂರದ ವ್ಯಾಪ್ತಿ  ಗಿಂತ ಹೆಚ್ಚಾಗಿರುವ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು
                     ………(15)
                      ………(16)
ಎಂದು ತೋರಿಸಬಹುದು. ಇಂಥ ಮಸೂರಗಳನ್ನು ತೆಳುಮಸೂರಗಳೆಂದು ಕರೆಯುತ್ತಾರೆ.
ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಕಾಂತಮಸೂರಗಳ ಉಪಯೋಗವೇ ಹೆಚ್ಚು. ಮೃದು ಕಬ್ಬಿಣದ ದಪ್ಪ ಹೊದಿಕೆಯುಳ್ಳ ತಾಮ್ರದ ತಂತಿಯ ಕೊಳವೆ ಸಿಂಬಿಗಳು ಅವುಗಳಲ್ಲಿ ವಿದ್ಯುತ್ ಪ್ರವಹಿಸಿದಾಗ ಕಾಂತ ಮಸೂರಗಳಂತೆ ವರ್ತಿಸುತ್ತವೆ. ವಿದ್ಯುತ್ ಪ್ರವಾಹದ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುವುದರಿಂದ ನಾಭಿದೂರವನ್ನು ಹೆಚ್ಚು ಕಡಿಮೆ ಮಾಡಬಹುದು. ಕಾಂತಕ್ಷೇತ್ರ ಒಂದು ನಿರ್ದಿಷ್ಟ ಪರಿಮಿತಿಯಲ್ಲಿ ವರ್ತಿಸುವಂತೆ ಮಾಡಲು ಮೃದುಕಬ್ಬಿಣದ ಹೊದಿಕೆಯಲ್ಲಿ ಸಂದುಗಳನ್ನು ಕತ್ತರಿಸಿರುತ್ತಾರೆ. ಈ ಸಂದಿನ ರಚನೆ, ಅದರ ಅಗಲ ಮತ್ತು ಸಿಂಬಿಯ ವ್ಯಾಸ ಕಾಂತಕ್ಷೇತ್ರದ ಬಲ ಮತ್ತು ವ್ಯಾಪ್ತಿಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತವೆ. ಚಿತ್ರಗಳು ಹೆಚ್ಚು ನಾಭಿದೂರ ಮತ್ತು ಕಡಿಮೆ ನಾಭಿದೂರದ ಕಾಂತ ಮಸೂರಗಳನ್ನು ತೋರಿಸುತ್ತವೆ.
ಪ್ರತಿಬಿಂಬದ ದೋಷಗಳು: ಕಾಂತ ಮತ್ತು ಸ್ಥಿರ ವಿದ್ಯುತ್ ಕ್ಷೇತ್ರಗಳು ಎಲೆಕ್ಟ್ರಾನ್ ಮಸೂರಗಳಂತೆ ವರ್ತಿಸುವುದನ್ನು ತಿಳಿಯಲು ಉಪಾಕ್ಷಕಿರಣಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಲಾಗಿದೆ. ಈ ಸ್ಥಿತಿ ಇಲ್ಲದಿದ್ದರೆ ಪ್ರತಿಬಿಂಬದಲ್ಲಿ ಅನೇಕ ದೋಷಗಳಿರುತ್ತವೆ. ದ್ಯುತಿ ಮಸೂರಗಳಿಂದ ಮೂಡುವ ಪ್ರತಿಬಿಂಬದಲ್ಲಿನ ಐದು ದೋಷಗಳೂ ಸ್ಥಿರ ವಿದ್ಯುತ್ ಮಸೂರದಿಂದ ಮಾಡುವ ಪ್ರತಿಬಿಂಬದಲ್ಲಿರುತ್ತವೆ.  ಇವುಗಳಲ್ಲದೆ ಕಾಂತಮಸೂರಗಳಿಂದ ಮೂಡುವ ಪ್ರತಿಬಿಂಬದಲ್ಲಿ ಬೇರೆ ದೋಷಗಳೂ ಇರುತ್ತವೆ. ಹೆಚ್ಚಿನ ದೋಷಗಳು ಪ್ರತಿಬಿಂಬ ತಿರುಗುವುದರಿಂದ ಹುಟ್ಟಿಕೊಳ್ಳುತ್ತವೆ.
(1) ಗೋಳವಿಪಥನ: ಅಕ್ಷದಿಂದ ಹೆಚ್ಚು ದೂರದಲ್ಲಿ ಮಸೂರವನ್ನು ತಲುಪುವ ಎಲೆಕ್ಟ್ರಾನುಗಳು ಹೆಚ್ಚು ಬಾಗುತ್ತವೆ. ಆದ್ದರಿಂದ ಅಕ್ಷದ ಮೇಲಿನ ಒಂದು ಬಿಂದು ಬಲಗಡೆ ಪ್ರತಿಬಿಂಬದಲ್ಲಿ ವೃತ್ತವಾಗಿ ಹರಡಿಕೊಳ್ಳುತ್ತದೆ. ಇದರ ತ್ರಿಜ್ಯ ಗೆ ಸರಿಗಟ್ಟಿ ವ್ಯತ್ಯಾಸವಾಗುತ್ತದೆ. ವಸ್ತುವಿನ ಪ್ರತಿಯೊಂದು ಬಿಂದುವೂ ಹೀಗೆ ಪ್ರತಿಬಿಂಬ ದಲ್ಲಿ ವಿಸ್ತೃತ ವೃತ್ತವಾಗಿ ಹರಡಿಕೊಳ್ಳುತ್ತದೆ. ಈ ದೋಷವನ್ನು ಗೋಳವಿಪಥನ ಎನ್ನುತ್ತಾರೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಬಳಸುವ ಕಾಂತ ಮತ್ತು ಸ್ಥಿರವಿದ್ಯುತ್ ಮಸೂರಗಳು ಅಭಿಸರಿಸುವ (ಕನ್ವರ್ಜಿಂಗ್) ಮಸೂರಗಳಾದ್ದರಿಂದ ಗೋಳವಿಪಥನ ವನ್ನು ಸಂಪುರ್ಣವಾಗಿ ನಿವಾರಿಸಲು ಆಗುವುದೇ ಇಲ್ಲ. ಇದು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯ ವಿಘಟನ ಸಾಮಥರ್ಯ್‌ವನ್ನು ನಿಯಂತ್ರಣಗೊಳಿಸುತ್ತದೆ.
(2) ಕೋಮ: ಇದು ಎರಡನೆಯ ದೋಷ. ಅಕ್ಷಕ್ಕೆ ದೂರವಾಗಿರುವ ಪ್ರತಿಯೊಂದು ಬಿಂದು ಪ್ರತಿಬಿಂಬದಲ್ಲಿ ಧೂಮಕೇತು ರೂಪ ತಾಳುವುದರಿಂದ ಈ ದೋಷಕ್ಕೆ ಕೋಮ ಎಂದು ಹೆಸರು ಬಂದಿದೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯಲ್ಲಿ ಕೋಮ ಅಷ್ಟು ಪ್ರಮುಖವಾದ ದೋಷವಲ್ಲ. ಪ್ರತಿಬಿಂಬೀಕರಣಗೊಳ್ಳುವ ವಸ್ತು ಅಕ್ಷದ ಅತಿ ಸಮೀಪದ ಪ್ರದೇಶಕ್ಕೆ ಸೀಮಿತಗೊಂಡಿರುತ್ತದೆ.
(3) ವಿಕೃತ(ಡಿಸ್ಟಾರ್ಶನ್): ಅಕ್ಷದಿಂದ ತ್ರಿಜ್ಯದಲ್ಲಿ ದೂರಹೋದಂತೆ ಪ್ರತಿಬಿಂಬದ ಲಂಬನ ಹೆಚ್ಚು ಇಲ್ಲವೆ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನು ಅನುಸರಿಸಿ ಕ್ರಮವಾಗಿ ಪಿನ್ವಿಕೃತ ಮತ್ತು ಪಿಪಾಯಿವಿಕೃತಗಳುಂಟಾಗುತ್ತವೆ. ಕಾಂತ ಮಸೂರಗಳಲ್ಲಿ ಇವುಗಳೊಂದಿಗೆ ತಿರುಗು ವಿಕೃತವೂ ಇರುತ್ತದೆ. ಈ ದೋಷಗಳು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯ ಪ್ರತಿಬಿಂಬಗಳಲ್ಲಿ ಕಾಣಿಸಿಕೊಳ್ಳುತ್ತವಾದರೂ ಅವುಗಳಿಂದ ಅಂಥ ತೊಂದರೆ ಏನೂ ಆಗುವುದಿಲ್ಲ. 
(4) ಆಸ್ಟಿಗ್ಮ್ಯಾಟಿಸಮ್: ಅಕ್ಷದಿಂದ ದೂರವಿರುವ ಒಂದು ವಸ್ತುಬಿಂದು ವಿನಿಂದ ಹೊರಟ ಎಲೆಕ್ಟ್ರಾನುಗಳು ಪ್ರತಿಬಿಂಬ ಮೂಡುವಲ್ಲಿ ಪರಸ್ಪರ ಲಂಬ ವಾಗಿರುವ ಎರಡು ಗೆರೆಗಳ ಮೇಲೆ ಬಂದು ಸೇರುತ್ತವೆ. ಸ್ಪಷ್ಟವಾದ ಪ್ರತಿಬಿಂಬ ಬಿಂದು ಯಾವ ಗೆರೆಯ ಮೇಲೂ ಕಾಣುವುದಿಲ್ಲ. ಈ ದೋಷವನ್ನು ಆಸ್ಟಿಗ್ಮ್ಯಾಟಿಸಮ್ ಎನ್ನುತ್ತಾರೆ. ಇದರ ಪರಿಣಾಮವೆಂದರೆ ಪ್ರತಿಬಿಂಬತಲದಲ್ಲಿ ಗೊಂದಲಪಡಿಸುವ ವೃತ್ತ. ಅಕ್ಷದಿಂದ ವಸ್ತು ಬಿಂದು ದೂರವಾದಷ್ಟೂ ಈ ಗೊಂದಲ ವೃತ್ತ ದೊಡ್ಡದಾಗುತ್ತದೆ. ಅಕ್ಷದ ಮೇಲೆ ಇಂಥ ಗೊಂದಲ ವೃತ್ತ ಮೂಡುವುದಿಲ್ಲ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯಲ್ಲಿ ಈ ದೋಷ ಗಣನೀಯವಾದುದಲ್ಲ.
(5) ವರ್ಣವಿಪಥನ (ಕ್ರೊಮ್ಯಾಟಿಕ್ ಆಬೆರೇಷನ್): ಭರ ಎಲೆಕ್ಟ್ರಾನ್ ಮತ್ತು ಮಂದ ಎಲೆಕ್ಟ್ರಾನುಗಳು ಒಂದೇ ನಾಭಿಗೆ ಬರುವುದಿಲ್ಲ. ಆದ್ದರಿಂದ ಒಂದೇ ಬಿಂದುವಿನಿಂದ ಹೊರಡುವ ಬೇರೆ ಬೇರೆ ವೇಗದ ಎಲೆಕ್ಟ್ರಾನುಗಳು ಆ ಬಿಂದುವಿನ ಪ್ರತಿಬಿಂಬವನ್ನು ಹರಡುತ್ತದೆ.
ಈ ದೋಷವನ್ನು ವರ್ಣವಿಪಥನ ಎನ್ನುತ್ತಾರೆ. ಕಾಂತಮಸೂರದಲ್ಲಿ ಪ್ರತಿಬಿಂಬ ತಿರುಗುವುದರಿಂದ ವರ್ಣೀಯ (ಕ್ರೊಮ್ಯಾಟಿಕ್) ತಿರುಗುದೋಷವೂ ಕಾಣಿಸಿಕೊಳ್ಳುತ್ತದೆ. ಈ ದೋಷಗಳನ್ನು ಕಡಿಮೆಮಾಡಲು ಎಲೆಕ್ಟ್ರಾನುಗಳ ವೇಗೋತ್ಕರ್ಷಕ್ಕೆ ಉಪಯೋಗಿಸುವ ವಿಭವಾಂತರದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು.
(6) ಕ್ಷೇತ್ರದ ವಕ್ರತೆ: ಮಸೂರದಲ್ಲಿ ಎಲ್ಲ ಭಾಗಗಳ ನಾಭಿದೂರ ಒಂದೇ ಆಗಿರುವುದಿಲ್ಲ. ಆದ್ದರಿಂದ ಒಂದು ಸಮತಲದ ಪ್ರತಿಬಿಂಬ ವಕ್ರವಾಗುತ್ತದೆ. ಈ ದೋಷವನ್ನು ಕ್ಷೇತ್ರದ ವಕ್ರತೆ ಎನ್ನುತ್ತಾರೆ. ವಸ್ತುವಿನ ವಿಸ್ತಾರ ಹೆಚ್ಚಾದರೆ ವಕ್ರತೆಯೂ ಹೆಚ್ಚಾಗುತ್ತದೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯಲ್ಲಿ ಈ ದೋಷ ತೀರ ಕಡಿಮೆ.
(7) ಆಕಾಶ ವಿದ್ಯುದಂಶದ ಪರಿಣಾಮ (ಸ್ವೇಸ್ ಚಾರ್ಜ್ ಎಫೆಕ್ಟ್‌): ಎಲೆಕ್ಟ್ರಾನುಗಳು ಪರಸ್ವರ ವಿಕರ್ಷಗೊಳ್ಳುತ್ತವೆ. ಆದ್ದರಿಂದ ಒಂದು ಎಲೆಕ್ಟ್ರಾನ್ ಕಿರಣ ಮುಂಬರಿದಂತೆಲ್ಲ ವಿಸ್ತಾರವಾಗುತ್ತ ಹೋಗುತ್ತದೆ. ಇದನ್ನು ಚಿತ್ರದಲ್ಲಿ ಕಾಣಬಹುದು. ಹೆಚ್ಚು ಎಲೆಕ್ಟ್ರಾನ್ ಸಾಂದ್ರತೆಯಿರುವ ಕಿರಣಗಳಲ್ಲಿ ಹರಡುವಿಕೆ ಹೆಚ್ಚಾಗಿರುತ್ತದೆ. ಈ ದೋಷವನ್ನು ಆಕಾಶ ವಿದ್ಯುದಂಶದ ಪರಿಣಾಮ ಎನ್ನುತ್ತಾರೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಎಲೆಕ್ಟ್ರಾನುಗಳ ವೇಗ ಹೆಚ್ಚಾಗಿರುವುದರಿಂದಲೂ ಕಿರಣಗಳಲ್ಲಿ ಸಾಂದ್ರತೆ ಕಡಿಮೆಯಿರುವುದರಿಂದಲೂ ಈ ದೋಷ ಅಷ್ಪಾಗಿ ಕಾಣಿಸಿಕೊಳ್ಳುವುದಿಲ್ಲ.	(ಎಸ್.ಎ.ಎಚ್.)
ಎಲೆಕ್ಟ್ರಾನ್ ನಮನ: ಎಲೆಕ್ಟ್ರಾನ್ ದೂಲಗಳು ತರಂಗ ಚಲನೆಯ ಗುಣವನ್ನು ಪ್ರದರ್ಶಿಸುವ ಒಂದು ಘಟನೆ (ಎಲೆಕ್ಟ್ರಾನ್ ಡಿಫ್ರ್ಯಾಕ್ಷನ್). ವೃತಿಕರಣ, ನಮನ ಮತ್ತು ಧ್ರುವೀಕರಣಗಳನ್ನು ವಿವರಿಸುವಾಗ ಬೆಳಕನ್ನು ವಿದ್ಯುತ್ಕಾಂತ ತರಂಗಗಳ ಪ್ರಸಾರವೆಂದೂ ದ್ಯುತಿವಿದ್ಯುತ್ ಕ್ರಿಯೆ ಮತ್ತು ಕಾಂಪ್ಟನ್ ಕ್ರಿಯೆಗಳನ್ನು ವಿವರಿಸುವಾಗ ಫೋಟಾನುಗಳ ಚಲನೆಯೆಂದೂ ಭಾವಿಸಬೇಕಾಗುತ್ತದೆ. ಫೋಟಾನುಗಳು ಬೆಳಕಿನ ಕಣಗಳು. ಇವುಗಳಿಗಿರುವ ತರಂಗ-ಕಣ ದ್ವೈತಗುಣದಂತೆ ಭೌತಕಣಗಳಿಗೂ ತರಂಗ-ಕಣ ದ್ವೈತಗುಣವಿದೆಯೆಂದು ಲೂಯಿಡಿಬ್ರಾಯಿ ಸೈದ್ಧಾಂತಿಕ ಆಧಾರದ ಮೇಲೆ ಸೂಚಿಸಿದ (1924). ಈ ಸೂಚನೆಯಂತೆ ಒಂದು ಕಣದ ಸಂವೇಗಕ್ಕೂ ಅದರ ತರಂಗಾಂತರಕ್ಕೂ ಇರುವ ಸಂಬಂಧವನ್ನು                    …….(1)
ಎಂದು ಬರೆಯಬಹುದು. ಇಲ್ಲಿ ್ಷ ಕಣದ ತರಂಗಾಂತರ P ಅದರ ಸಂವೇಗ ಮತ್ತು h ಪ್ಲಾಂಕನ ನಿಯತಾಂಕ. ಅತಿ ನಿಧಾನವಾಗಿ ಚಲಿಸುವ ಒಂದು ದೂಳಿನ ಕಣದ ತರಂಗಾಂತರ ಕೂಡ ಸಮೀಕರಣ (1)ರ ಪ್ರಕಾರ 10-8Å ಗಿಂತ ಕಡಿಮೆ ಇರುತ್ತದೆ. ಯಾವುದೇ ಭೌತ ರಚನೆಯ ಅಡ್ಡಗಲವಾದರೂ ಇದಕ್ಕಿಂತ ಹೆಚ್ಚಾಗಿರುವುದರಿಂದ ನಮನ ಪ್ರಯೋಗಗಳಿಂದ ಡಿಬ್ರಾಯಿಯ ಸೂಚನೆಯನ್ನು ಸ್ಥಿರಪಡಿಸಲು ತತ್ಕ್ಷಣ ಸಾಧ್ಯವಾಗಲಿಲ್ಲ.
ಎಲೆಕ್ಟ್ರಾನುಗಳ ಜಡಮಾನ 9.1x10-28 ಗ್ರಾಂ 0.10 ವೊಲ್ಟ್‌ ವಿಭವಾಂತರದ ಮೂಲಕ ಹಾಯ್ದು ಬಂದರೆ ಅವುಗಳ ಸಂವೇಗ (ಮೊಮೆಂಟಂ)1.7x10-19 ಗ್ರಾಂ-ಸೆಂಮೀ-ಸೆ.-1 ಆಗುತ್ತದೆ. ಇಷ್ಟು ಸಂವೇಗವಿರುವ ಕಣಗಳ ತರಂಗಾಂತರ 3.9Å. ಸ್ಫಟಿಕಗಳ ಒಳ ಸಮತಲದೂರ ಸಾಮಾನ್ಯವಾಗಿ ಈ ಪ್ರಮಾಣ ದಲ್ಲಿ ಇರುತ್ತದೆ. ಆದ್ದರಿಂದ ನೆರವಿ ನಿಂದ ಎಲೆಕ್ಟ್ರಾನ್ ನಮನ ಪ್ರಯೋಗಗಳನ್ನು ಮಾಡುವುದು ಸಾಧ್ಯವಾಯಿತು.
1927ರಲ್ಲಿ ಡೇವಿಸನ್ ಮತ್ತು ಜರ್ಮರ್ ಎಂಬುವರು ಎಲೆಕ್ಟ್ರಾನ್ ನಮನ ಪ್ರಯೋಗ ಗಳನ್ನು ಯಶಸ್ವಿಯಾಗಿ ನಡೆಸಿದರು. ನಿಕ್ಕಲ್ ಸ್ಫಟಿಕದ ರಚನೆ ಅವರ ಪ್ರಯೋಗಗಳಿಗೆ ಸಹಕಾರಿಯಾಯಿತು. ಇದು ಮುಖಮಧ್ಯ ಘನ ಸ್ಫಟಿಕ (ಫೇಸ್ ಸೆಂಟರ್ಡ್‌ ಕ್ಯೂಬಿಕ್ ಕ್ರಿಸ್ಟಲ್). ಇದರ ಘಟಕಕೋಶದ ಎಂಟು ಮೂಲೆಗಳಲ್ಲೂ ಮತ್ತು ಪ್ರತಿಮುಖದ ಮಧ್ಯದಲ್ಲೂ ಪರಮಾಣುಗಳಿವೆ. ಘಟಕಕೋಶದ ಅಂಚಿನ ದೂರ 3.51Å ಇದನ್ನು ಚಿತ್ರದಲ್ಲಿ ತೋರಿಸಿದೆ. ಹಾಗೆಯೇ ಒಂದು ಕರ್ಣಕ್ಕೆ ಲಂಬವಾಗಿ ಕತ್ತರಿಸಿರುವ ಸಮತಲವನ್ನು ನೋಡಬಹುದು. ಇದರಲ್ಲಿ ಒಂದು ಪರಮಾಣು ಶ್ರೇಣಿಗೂ ಇನ್ನೂಂದು ಪರಮಾಣು ಶ್ರೇಣಿಗೂ ಇರುವ ಅಂತರ 2.15Å. ಇದನ್ನು ರೇಖಾಂತರ ಜ=2.15Å. ಇರುವ ಒಂದು ಸಮತಲ ರೇಖಾಪಟಲವೆಂದು ಪರಿಗಣಿಸಬಹುದು, ಇದರ ಮೇಲೆ ತ್ರಿಕೋನದ ಯಾವುದಾದರೂ ಒಂದು ಬಾಹುವಿಗೆ ಪತನ ಸಮತಲ ಲಂಬವಾಗಿರುವಂತೆ ಎಲೆಕ್ಟ್ರಾನುಗಳು ಬಿದ್ದರೆ ಅವು ನಮನಗೊಳ್ಳುತ್ತವೆ. ಇದು ಅನುಸರಿಸುವ ಸಂಬಂಧವನ್ನು 
                                 ಜ siಟ್ಲಿ=ಟ್ಷಿ                            .....(2)
ಎಂದು ಬರೆಯಬಹುದು. ಇಲ್ಲಿ ್ಲ ನಮನ ಮತ್ತು ಪತನದೂಲಗಳ ಮಧ್ಯೆ ಏರ್ಪಡುವ ಕೋನ, ಟಿ ಒಂದು ಪುರ್ಣಾಂಕ. ಡೇವಿಸನ್ ಮತ್ತು ಜರ್ಮರ್ ಅವರ ಪ್ರಯೋಗದ ಉಪಕರಣಗಳನ್ನು ಚಿತ್ರದಲ್ಲಿ ನೋಡಬಹುದು. 
ಕಾದ ಟಂಗ್ಸ್ಟನ್ ತಂತುವಿನಿಂದ ಹೊರಹೊಮ್ಮಿದ ಎಲೆಕ್ಟ್ರಾನುಗಳು ವೇಗೋತ್ಕರ್ಷ ಗೊಂಡು ನಿಕ್ಕಲ್ ಸ್ಫಟಿಕದ ಮೇಲೆ ಬೀಳುತ್ತವೆ. ಸ್ಫಟಿಕದಲ್ಲಿ ನಮನಗೊಂಡ ಎಲೆಕ್ಟ್ರಾನುಗಳು ತೆರೆಯಲ್ಲಿರುವ ರಂಧ್ರದ ಮೂಲಕ ದರ್ಶಕವನ್ನು ತಲಪುತ್ತವೆ. ಇವುಗಳ ಸಂಖ್ಯೆಗಳಿಗೆ ಅನುಗುಣವಾಗಿ ಮಾಪಕ (ಮೀಟರ್) ವಾಚಕವನ್ನು (ರೀಡಿಂಗ್) ತೋರಿಸುತ್ತದೆ. ಸ್ಫಟಿಕ ದಲ್ಲಿ ಯಾವ ಕಾರಣಕ್ಕಾದರೂ ಶಕ್ತಿಯನ್ನು ಕಳೆದುಕೊಂಡ ಎಲೆಕ್ಟ್ರಾನುಗಳು ದರ್ಶಕವನ್ನು ತಲುಪದಂತೆ ತಡೆಯಲು ಅದಕ್ಕೆ ಋಣ ವಿಭವ ವನ್ನು ಆರೋಪಿಸಲಾಗಿದೆ.
54 ವೋಲ್ಟ್‌ ಎಲೆಕ್ಟ್ರಾನುಗಳು ನಮನಗೊಂಡಾಗ ದರ್ಶಕವನ್ನು ತಲಪುವ ಎಲೆಕ್ಟ್ರಾನುಗಳ ಸಂಖ್ಯೆ ಓ(್ಲ) ಮತ್ತು ್ಲ ಗಳಿಗಿರುವ ಸಂಬಂಧವನ್ನು ಚಿತ್ರ 3ರಲ್ಲಿರುವ ರೇಖಾಚಿತ್ರ (ಗ್ರಾಫ್) ತೋರಿಸುತ್ತದೆ. 50ºಯಲ್ಲಿ ಒಂದು ಶೃಂಗವಿದೆ. 54 ವೋಲ್ಟ್‌ ವಿಭವಾಂತರದ ಮೂಲಕ ಹಾಯ್ದು ಬರುವ ಎಲೆಕ್ಟ್ರಾನುಗಳ ತರಂಗಾಂತರ ಸಮೀಕರಣ (1)ರ ಪ್ರಕಾರ 1.67Å. ಸಮೀಕರಣ (2)ರ ಪ್ರಕಾರ ಇದು 1.65Å. ಅಗುತ್ತದೆ. ಈ ಎರಡು ಬೆಲೆಗಳು ಒಂದಕ್ಕೊಂದು ಅತಿ ಸಮೀಪದಲ್ಲಿದ್ದು ಡಿಬ್ರಾಯಿಯ ಸೂಚನೆಯನ್ನು ಸಮರ್ಥಿಸುತ್ತವೆ.
ಜೆ.ಪಿ. ಥಾಮ್ಸನ್ನನು ಸ್ಫಟಿಕಗಳ ಮೂಲಕ ಹಾಯುವ ಎಲೆಕ್ಟ್ರಾನುಗಳ ನಮನ ಪ್ರಯೋಗವನ್ನು ಮಾಡಿದ (1928). ಸ್ಫಟಿಕಗಳ ಒಳಸಮತಲ ದೂರ ಮತ್ತು ಓರೆಕೋನಗಳಿರುವ ಸಂಬಂಧವನ್ನು ಬ್ರ್ಯಾಗ್ ನಿಯಮ ಕೊಡುತ್ತದೆ. ಈ ನಿಯಮದ ಜ್ಯಾಮಿತಿಕ ನಿರೂಪಣೆಯನ್ನು ಚಿತ್ರದಲ್ಲಿ ನೋಡಬಹುದು. ಜ ಅಂತರದಲ್ಲಿರುವ ಮಟ್ಟ ಗೆರೆಗಳು ಸ್ಫಟಿಕದ ಸಮತಲಗಳನ್ನು ಪ್ರತಿನಿಧಿಸುತ್ತವೆ. I1 ಮತ್ತು I2 ಎಲೆಕ್ಟ್ರಾನ್ ಪತನದೂಲಗಳು (ಇನ್ಸಿಡೆಂಟ್ ಬೀಮ್ಸ್‌). ಅವು ಂ ಮತ್ತು ಃ ಯಲ್ಲಿರುವ ಪರಮಾಣುಗಳಿಗೆ ತಾಗಿ ಚದರುತ್ತವೆ. ಬ್ರ್ಯಾಗ್ ನಿಯಮಕ್ಕೆ ಅನುಗುಣವಾಗಿ ಓರೆಕೋನ ಇದ್ದರೆ ಚದರಿದ ದೂಲಗಳು ಸ್ಫಟಿಕ ಸಮತಲಗಳಿಗೆ ಪತನದೂಲ ಗಳಂತೆಯೆ ಕೋನಗಳನ್ನುಂಟು ಮಾಡುತ್ತವೆ. ಖ1 ಮತ್ತು ಖ2 ಚದರಿದ ದೂಲಗಳು. ಈ ದೂಲಗಳಿಗಿರುವ ದಾರಿ ವ್ಯತ್ಯಾಸ ಈಃಊ. ರಚನಾತ್ಮಕ ವ್ಯತಿಕರಣ ಸಂಭವಿಸಬೇಕಾದರೆ.
ಈಃಊ=ಟ್ಷಿ               .....(3)
ಅಗಬೇಕು. ಚಿತ್ರದ ಜ್ಯಾಮಿತಿಯಿಂದ
ಈಃಊ=ಇಃ=2ಜsiಟ್ಲಿ    .....(4) ಎಂದಾಗುತ್ತದೆ. ಈಗ ಬ್ರ್ಯಾಗ್ ನಿಯಮದ ಸಮೀಕರಣ ರೂಪವನ್ನು 
2ಜsiಟ್ಲಿ=ಟ್ಷಿ              ....(5) 
ಎಂದು ಬರೆಯಬಹುದು. ಎಲೆಕ್ಟ್ರಾನುಗಳಿಗೆ ಸಂಬಂಧಿಸಿದಂತೆ ಓರೆಕೋನ ಬಹಳ ಕಡಿಮೆ ಇರುತ್ತದೆ. ಆದ್ದರಿಂದ (5)ನ್ನು
2ಜ್ಲ=ಟ್ಷಿ               ....(6) 
ಎಂದು ಬರೆಯಬಹುದು. 
ಬ್ರ್ಯಾಗ್ ನಿಯಮಕ್ಕೆ ಸರಿಯಾಗಿ ಮಾಲಿಕೊಂಡಿರುವ ಸಮತಲಗಳುಳ್ಳ ಒಂದು ಏಕಸ್ಫಟಿಕದ ಮೇಲೆ ಪತನವಾಗುವ ಎಲೆಕ್ಟ್ರಾನುಗಳು ಪ್ರತಿಫಲನಗೊಂಡು ಮಾದರಿಗೆ ಸ್ವಲ್ಪ ದೂರದಲ್ಲಿ ಬೊಟ್ಟನ್ನು ಮೂಡಿಸುತ್ತವೆ. ಹಾಗಲ್ಲದೆ ಅವು ಸಣ್ಣ ಸಣ್ಣ ಸ್ಫಟಿಕಗಳ ಸಮೂಹದ ಮೂಲಕ ಹಾಯ್ದರೆ ಅಡ್ಡಾದಿಡ್ಡಿ ಯಾಗಿ ಮಾಲಿಕೊಂಡಿರುವ ಸಹಸ್ರಾರು ಸಮತಲಗಳಿಂದ ಬ್ರ್ಯಾಗ್ ಪ್ರತಿಫಲನಗೊಂಡು ಟೊಳ್ಳು ಬುಗರಿಯ ಆಕಾರದಲ್ಲಿ ಹೊರಕ್ಕೆ ಬರುತ್ತವೆ. 
ಅವುಗಳಿಗೆ ಅಡ್ಡವಾಗಿ ಒಂದು ಫೋಟೋಗ್ರಫಿ ತಟ್ಟೆಯನ್ನು ಇಟ್ಟರೆ ಅದರ ಮೇಲೆ ವೃತ್ತಗಳು ಮೂಡುತ್ತವೆ. ಇದನ್ನು ಚಿತ್ರದಲ್ಲಿ ಕಾಣಬಹುದು. ಆ ವೃತ್ತದ ವ್ಯಾಸ ಮತ್ತು ಐ ಮಾದರಿಗೂ ತಟ್ಟೆಗೂ ಇರುವ ದೂರ ಆಗಿದ್ದರೆ ಸಮೀಕರಣ (6) ರಿಂದ                             ...........(7)
ಎಂದು ಬರೆಯಬಹುದು. ಟಿ ತಿಳಿದಿದ್ದರೆ ಜ ತಿಳಿಯುತ್ತದೆ.
ಥಾಮ್ಸನ್ನನ ಉಪಕರಣಗಳನ್ನು ಚಿತ್ರದಲ್ಲಿ ನೋಡಬಹುದು. ವಿಸರ್ಜನ ಕೊಳವೆ ಯಲ್ಲಿ ಎಲೆಕ್ಟ್ರಾನುಗಳು ಉತ್ಪತ್ತಿಯಾಗಿ ಃ ಮೂಲಕ ಹಾಯುತ್ತವೆ. ಃ ಯ ಹಿಂಬದಿಯಲ್ಲಿ ಸ್ವಲ್ಪ ದೂರಕ್ಕೆ ಲೋಹದ ಪೊರೆ ಇದೆ. ಇದು ಸಣ್ಣ ಸಣ್ಣ ಸ್ಫಟಿಕಗಳ ಸಮುಚ್ಚಯ. ಫೋಟೋಗ್ರಫಿ ತಟ್ಟೆಯನ್ನು ಕೆಳಕ್ಕೆ ಜಾರಿಸುವುದಕ್ಕೆ ಮುಂಚೆ ಎಲೆಕ್ಟ್ರಾನ್ ನಮನ ನಮೂನೆಯನ್ನು ಪ್ರತಿದೀಪ್ತಶೀಲ (ಫ್ಲೂರಸೆಂಟ್) ತೆರೆಯಮೇಲೆ ನೋಡಬಹುದು. ಈ ನಮೂನೆ ಎಲೆಕ್ಟ್ರಾನ್ನಮನದಿಂದ ಹುಟ್ಟಿದುದೆಂಬುದನ್ನು ಖಚಿತಪಡಿಸಲು ಥಾಮ್ಸನ್ ಕಾಂತಕ್ಷೇತ್ರದಲ್ಲಿ ಎಲೆಕ್ಟ್ರಾನುಗಳನ್ನು ಬಾಗಿಸಿ ತತ್ಫಲವಾಗಿ ನಮೂನೆ ಸ್ಥಳಾಂತರಗೊಳ್ಳುವುದನ್ನು ತೋರಿಸಿದ. 
ಚಿತ್ರದಲ್ಲಿ ತೆಳುವಾದ ಚಿನ್ನದ ಹಾಳೆಯ ಮೂಲಕ 30ಞv  ಎಲೆಕ್ಟ್ರಾನುಗಳು ಹಾಯುವುದರಿಂದ ಮೂಡಿದ ನಮನ ನಮೂನೆಯನ್ನು ನೋಡಬಹುದು. ಮಧ್ಯದ ಬಿಳಿಬೊಟ್ಟು ನಮನಗೊಳ್ಳದೆ ಇರುವ ಎಲೆಕ್ಟ್ರಾನುಗಳಿಗೆ ಸಂಬಂಧಿಸಿದುದು. ಮುಂದೆ ಬರೆದಿರುವ ಪಟ್ಟಿಯಲ್ಲಿ ಅಲ್ಯೂಮಿನಿಯಂ, ಚಿನ್ನ ಮತ್ತು ಪ್ಲಾಟಿನಂ ಲೋಹಗಳ ಒಳಸಮತಲ ದೂರಗಳ ಹೋಲಿಕೆಯನ್ನು ಕೊಟ್ಟಿದೆ. 
ಎಕ್ಸ್‌ಕಿರಣ ನಮನ ಮೌಲ್ಯಗಳು ಎಲೆಕ್ಟ್ರಾನ್ ನಮನ ಮೌಲ್ಯಗಳಿಗೆ ತೀರಾ ಹತ್ತಿರವಿದ್ದು ಎಲೆಕ್ಟ್ರಾನುಗಳ ತರಂಗಸ್ವಭಾವವನ್ನು ಸ್ಪಷ್ಟವಾಗಿ ತೋರಿಸುತ್ತವೆ.
 ಎಕ್ಸ್‌ಕಿರಣ ಮತ್ತು ಎಲೆಕ್ಟ್ರಾನ್ ನಮನ ಪ್ರಯೋಗಗಳಿಂದ ಒದಗಿದ ಒಳಸಮತಲ ದೊರೆಗಳು

	

1982ರಲ್ಲಿ ಇಂಥವೇ ಪ್ರಯೋಗಗಳನ್ನು ಕಿಕೂಚಿ ನಡೆಸಿದ. ಅಭ್ರಕದ ತೆಳುವಾದ ಏಕಸ್ಫಟಿಕ ಹಾಳೆಗಳ ಮೂಲಕ 10-85ಞಗಿ ಎಲೆಕ್ಟ್ರಾನುಗಳನ್ನು ಹಾಯಿಸಿ ಅವುಗಳ ನಮನ ವನ್ನು ಪರಿಕ್ಷಿಸಿದ. ಚಿತ್ರದಲ್ಲಿ 68ಞಗಿ ಎಲೆಕ್ಟ್ರಾನುಗಳನ್ನು ಕಿಕೂಚಿ ಅಭ್ರಕದ ತೆಳುವಾದ ಹಾಳೆಯ ಮೂಲಕ ಹಾಯಿಸಿ ಫೋಟೋ ತೆಗೆದಿರುವ ನಮನ ನಮೂನೆಯನ್ನು ಕಾಣಬಹುದು.
ಎಲೆಕ್ಟ್ರಾನುಗಳ ನಮನ ಎಕ್ಸ್‌ಕಿರಣಗಳ ನಮನದಂತೆಯೇ ಸ್ಫಟಿಕಗಳ ಆಂತರಿಕ ರಚನೆಯನ್ನು ತಿಳಿಯಲು ಸಹಾಯಕವಾಗಿದೆ. ಇದರ ಜೊತೆಗೆ ಸೈದ್ಧಾಂತಿಕವಾಗಿ ಇದು ತರಂಗಬಲವಿಜ್ಞಾನದ (ವೇವ್ ಮೆಕನಿಕ್ಸ್‌) ಬೆಳೆವಣಿಗೆಗೆ ಭದ್ರವಾದ ಅಡಿಪಾಯವನ್ನು ಹಾಕಿದೆ.	(ಎಸ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ